ಸೋಮವಾರ, ನವೆಂಬರ್ 23, 2009

ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಮರೆಯಬೇಡಿ!


ಯಾವುದೂ ನೆನಪಿಗೇ ಬರಿತಿಲ್ಲ ,ಏನು ಮಾಡಲಿ ? ಬಹಳಷ್ಟು ಮಂದಿಯನ್ನು ಕಾಡುವ ಸಮಸ್ಯೆ ಇದು.
ಹಾಗಾದರೆ ಸುಲಭ ಪರಿಹಾರ ಏನು ? ಡಯಟ್ ! ಹೌದು, ಆಹಾರದಲ್ಲಿ ಕೆಲವು ಬದಲಾವಣೆ ಮಾಡಿ ಕೊಳ್ಳುವ
ಮೂಲಕ ಸ್ಮರಣಶಕ್ತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬಹುದು.
ಅಷ್ಟಕ್ಕೂ ನೆನಪಿನ ಶಕ್ತಿ ಕ್ಷೀನೀಸುವುದೇಕೆ ?
ವಯಸ್ಸು ಹೆಚ್ಚುತ್ತ ಹೋದಂತೆ ಹೈಪರ್ ಟೆನ್ಷನ್, ಮಧುಮೇಹ ,ವಿಟಮಿನ್ ಕೂರತೆ ,ಹೈಪೋಥ್ಯೇರಾಯಿಡ್
ಮುಟ್ಟುನಿಲ್ಲುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ . ಸ್ಮರಣಶಕ್ತಿ ಕಡಿಮೆಯಾಗುವುದಕ್ಕೂ ಇವೇ
ಕಾರಣಗಳು .ಇಂತಾ ಸಮಸ್ಯೆಗಳು ನಿರಂತರವಾಗಿ ಮುಂದುವರಿದರೆ ಅಲ್ಜೆಮರನಂಥ ಕಾಯಿಲೆ ಕೂಡ ಬರಬಹುದು.
ವ್ಯಾಯಾಮ ಮತ್ತು ಆಹಾರದತ್ತ ಗಮನ ಕೂಡುವುದರ ಮೂಲಕ ಈ ಸಮಸ್ಯೆಗಳನ್ನು ಸಾಕಷ್ಟು ಮಟ್ಟಿಗೆ ನಿಯತ್ರಿಸಿಕೂಳ್ಳಬಹುದು.
ಇವುಗಳನ್ನು ಸೇವಿಸಿ
>>ಪಾಲಕ್ ,ಕಿತ್ತಳೆ ,ಸ್ತ್ರಾಬೇರ,ಸೇಬು ಮುಂತಾದ ನಾರಿನಂಶ ಇರುವ ತಾಜಾ ಹಣ್ಣು -ತರಕಾರಿ ,ಸೊಪ್ಪುಗಳು .
>>ರಕ್ತನಾಳಗಳಲ್ಲಿ ಕ್ರಿಯಾಶೀಲತೆ ಹೆಚ್ಚಿಸುವ ಆಲಿವ್ಆಯಿಲ್ .
>>ಬಾದಾಮಿ ಮತ್ತು ಇತರೆ ಒಣ ಹಣ್ಣುಗಳು .
>>ವಿಟಮಿನ್ ಇ ಮತ್ತು ಸಿ ಇರುವ ಬೇಳೆ, ಹಸಿರು ತರಕಾರಿಗಳು.
ಇವು ಬೇಡ
*ಅಲರ್ಜಿ ಉಂಟುಮಾಡುವ ಪದಾರ್ಥಗಳು .
*ಜಾಸ್ತಿ ಉಪ್ಪು .*ಮದ್ಯಪಾನ ,ಧೂಮಪಾನ .

ಸೋಮವಾರ, ಜುಲೈ 6, 2009

ಕಾರು ಪ್ರಯಾಣ ಅಧಿಕ ,ಆರೋಗ್ಯಕ್ಕೆ ಕಂಟಕ .


ಕಾರಿನ ಅತಿಯಾದ ಅವಲಂಬನೆ ತರವಲ್ಲ.ಸಾಮಾನ್ಯವಾಗಿ ರಾಸಾಯನಿಕಗಳು ಕಾರಿನ ನಾನಾ ಭಾಗಗಳಲ್ಲಿ ಇರುತ್ತವೆ.ಹೆಚ್ಚು ಸಮಯ ಪಾಲನೆ ಅಥವಾ ಅಸಮರ್ಪಕ ವಿಧಾನ ಅನುಸರಣೆಯೂ ಕೆಲವು ಆರೋಗ್ಯ ಸಮಸ್ಯೆಗಳನ್ನು ತರಬಹುದು.



-ವೈದ್ಯರ ಅಭಿಪ್ರಾಯ-

ಕುಳಿತುಕೊಳ್ಳುವ ಭಂಗಿ ಸರಿಯಾಗಿಲ್ಲವಾದರೆ ಕೆಲವು ಸಮಸ್ಯೆಗಳು ಉಂಟಾಗುತ್ತವೆ. ಬೆನ್ನು ನೋವು ಕಾಡುವುದು ಹೆಚ್ಚು ಮೂಳೆ ಹಾಗೂ ನರಕ್ಕೆ ಸಂಬಂಧಿಸಿದ ಸಮಸ್ಯೆಗಳೇ ಉಂಟಾಗುತ್ತವೆ.ಇದ್ದಕ್ಕಿದ್ದಂತೆ ಬ್ರೇಕ್ ಹಾಕುವುದರಿಂದ ಬೆನ್ನು ಮೂಳೆ ಜರುಗುವ ಸಾಧ್ಯತೆ ಇರುತ್ತದೆ.ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುವ ಕಾರು ಚಾಲಕರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ.ಕೆಲವೂಮ್ಮೆ ರಸ್ತೆ ಉಬ್ಬುಗಳನ್ನು ದಾಟುವಾಗಲು ದೇಹದ ಬಾಗಗಳು ಕುಲಕಿದಂತಾಗತ್ತದೆ.ಈ ಸಂದರ್ಭದಲ್ಲಿ ನಾನಾ ಸಮಸ್ಯೆಗಳು ಉಂಟಾಗಬಹುದು.ಮೊದಲೇ ಬೆನ್ನು ನೋವು ಇರುವವರಿಗೆ ಹೆಚ್ಚಾಗಬಹುದು.ಹೀಗಾಗಿ ಹೆಚ್ಚು ದೀರ್ಘಾವಧಿ ಕಾರು ಚಲಿಸುವುದು ಒಳ್ಳೆಯದಲ್ಲ.ಅಲ್ಲದೆ ಚಾಲನೆ ವೇಳೆ ಸೂಕ್ತ ವಿಧಾನ ಅನುಸರಿಸುವುದರಿಂದ ಸಮಸ್ಯೆಯಿಂದ ಪಾರಾಗಬಹುದು
ಹವಾ ನಿಯಂತ್ರಣ ವ್ಯವಸ್ಥೆಯಿಂದ ಅಪಾಯ
ಕಾರುಗಳಲ್ಲಿ ಬಳಸುವ ವಸ್ತುಗಳಲ್ಲಿ ಸಾಕಷ್ಟು ಬಗೆಯ ಹಾನಿಕಾರಕ ವಸ್ತುಗಳು ಒಳಗೊಂಡಿರುತ್ತದೆ.ಇದನ್ನು ಒಳಾಂಗಣ ಮಾಲಿನ್ಯ ಎನ್ನಲಾಗುತ್ತದೆ.ಕೇವಲ ೫ ರಿಂದ೧೦ ಕಿ ಮೀ ದೂರ ಸಂಚರಿಸುವ ವೇಳೆಗೆ ಹಾನಿಕಾರಕ ವಸ್ತುಗಳು ಕಾರಿನ ತುಂಬ ಪಸರಿಸುತ್ತದೆ.ಇದರ ಪ್ರಮಾಣ ಕಡಿಮೆಯಾಗಿದ್ದರೂ ,ದೀರ್ಘಾವಧಿ ಪ್ರಯಾಣಿಸುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.ಕಿಟಕಿಬಾಗಿಲುಗಳನ್ನು ಹಾಕಿಕೊಂಡು ಸಂಚರಿಸುವುದರಿಂದ ರಾಸಾಯನಿಕಗಳು ಕಾರಿನ ಒಳಗೆ ಉಳಿದು ಬಿಡುತ್ತವೆ.ಹವಾನಿಯಂತ್ರಣ ವ್ಯವಸ್ಥೆಯಿಂದ ಮತ್ತಷ್ಟು ಅಪಾಯ ಎದುರಾಗುತ್ತದೆ. ಹೀಗಾಗಿ ಹವಾನಿಯಂತ್ರಣ ವ್ಯವಸ್ಥೆಯನ್ನು ತೆಗೆದು ಹಾಕುವುದೇ ಒಳ್ಳೆಯದು. ಸಾದ್ಯವಾದಸ್ಟು ಕಿಟಕಿ ಬಾಗಿಲುಗಳನ್ನು ಮುಕ್ತವಾಗಿರಿಸುವುದು ಸೂಕ್ತ ಶುದ್ದಗಾಳಿ ಕಾರಿನ ಒಳಗೆ ಬರುವುದರಿಂದ ಹೊರಗೆ ಹೋಗುತ್ತದೆ.